ಅಧಿಕ ರಕ್ತದೊತ್ತಡವು ಇದೀಗ ಜನಸಾಮಾನ್ಯರ ರೋಗವಾಗಿ ಪರಿವರ್ತಿತಗೊಂಡಿದ್ದು, ವಿಶ್ವದಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಇದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವ ರೋಗಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ವರದಿಯ ಪ್ರಕಾರ, ಅಮೆರಿಕಾವೊಂದರಲ್ಲಿಯೇ 73 ದಶಲಕ್ಷ ಜನರು ಅಧಿಕ ರಕ್ತದೊತ್ತಡದಲ್ಲಿ ನರಳುತ್ತಿದ್ದು, ಹೆಚ್ಚಿನವರಿಗೆ ತಮಗೆ ರೋಗ ಇರುವ ಕುರಿತು ಇನ್ನೂ ಅರಿವಿಲ್ಲ ಎಂದು ತಿಳಿಸಿದೆ. ಸಾಮಾನ್ಯ ಭಾಷೆಯಲ್ಲಿ ‘ಬಿಪಿ’ ಎಂದು ಕರೆಯಲ್ಪಡುವ ಅಧಿಕ ರಕ್ತದೊತ್ತಡ ಪ್ರಕರಣಗಳು ಪ್ರಸ್ತುತ ಹೆಚ್ಚಾಗುತ್ತಿದ್ದು, ಕೆಲವರಿಗೆ ಇದು ತಿಳಿದಿದ್ದರೆ, […]
↧