ವೈದ್ಯಕೀಯ ರಂಗದಲ್ಲಿ ಭಾರೀ ಅಭಿವೃದ್ಧಿಯಾಗಿದ್ದೇವೆ ಎಂದು ಹೇಳುತ್ತಿದ್ದರೂ ಶೀತವೆಂಬ ತಣ್ಣಗಿನ ಕಾಯಿಲೆಗೆ ಸೂಕ್ತವಾದ ಔಷಧವನ್ನು ಈವರೆಗೆ ಕಂಡುಹಿಡಿಯಲಾಗಲಿಲ್ಲ ಎಂಬ ಕೊರಗು ವೈದ್ಯಲೋಕವನ್ನು ಆವರಿಸಿತ್ತು. ಇದಕ್ಕಾಗಿ ಹಲವು ಪ್ರಯತ್ನಗಳು ಮಾಡುತ್ತಿದ್ದರೂ ಯಶಸ್ವಿಯಾಗದಿರುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿತ್ತು. ಇದೀಗ ಶೀತದ ಸಹಿಸಲಸಾಧ್ಯ ಕಿರಿಕಿರಿಯನ್ನು ಅನುಭವಿಸುವ ಕಾಲ ದೂರವಾಗುವ ದಿನ ಸನಿಹವಾಗಿದೆ. ಯಾಕೆಂದರೆ, ಮಾನವ ದೇಹಕ್ಕೆ ತೊಂದರೆ ಮಾಡಬಲ್ಲ ಶೀತ ಉಂಟುಮಾಡಬಲ್ಲ ‘ರಿನೋ ವೈರಸ್’ನ್ನು ತಡೆಯಬಲ್ಲ ಚಿಕಿತ್ಸೆಯ ಪೂರ್ವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಲಂಡನ್‌ನಲ್ಲಿರುವ ಇಂಪೀರಿಯಲ್ ಕಾಲೇಜಿನ ಸಂಶೋಧನಾ ತಂಡ ತಿಳಿಸಿದೆ. […]
↧