ಮಾಲೆ: ಕಳೆದ ತಿಂಗಳು ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅಬ್ದುಲ್ ಗಯೂಮ್ ಅವರಿದ್ದ ದೋಣಿ ಸ್ಫೋಟಿಸಿ ಹತ್ಯೆಗೆ ಯತ್ನಿಸಿದ ಆರೋಪ ಮೇಲೆ ಚೀನಾಕ್ಕೆ ತೆರಳಿದ್ದ ಮಾಲ್ಡೀವ್ಸ್‌ನ ಉಪಾಧ್ಯಕ್ಷ ಅಹ್ಮದ್ ಅದೀಬ್ ರನ್ನು ಮಾಲ್ಡೀವ್ಸ್ ಪೊಲೀಸರು ಬಂಧಿಸಿದ್ದಾರೆ. ಸೆಪ್ಟಂಬರ್ 28ರಂದು ಹಜ್ ಯಾತ್ರೆ ಮುಗಿಸಿ ಸೌದಿಯಿಂದ ಹಿಂದಿರುಗುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಮತ್ತು ಅವರ ಪತ್ನಿ ಏರ್‌ಪೋರ್ಟ್‌ನಿಂದ ಮಾಲೆ ನಗರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕ ದೋಣಿ ಎಂಜಿನ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಇಬ್ಬರೂ ಅಪಾಯದಿಂದ ಪಾರಾಗಿದ್ದರು.
↧