ಇಸ್ಲಾಮಾಬಾದ್, ಜ.29-ಭಯೋತ್ಪಾದಕ ಕೃತ್ಯಗಳು ನಡೆದ ಎಲ್ಲಾ ಸಂದರ್ಭಗಳಲ್ಲೂ ಭಾರತವು ಪಾಕಿಸ್ತಾನದ ವಿರುದ್ಧವೇ ಆರೋಪ ಮಾಡುತ್ತದೆ ಎಂದು ಆರೋಪಿಸಿರುವ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಖಾಜಿ ಖಲೀಲುಲ್ಲಾ, ಭಯೋತ್ಪಾದನೆ ಕೇವಲ ಭಾರತವೊಂದರ ಸಮಸ್ಯೆಯಾಗಿರದೆ, ಪಾಕಿಸ್ತಾನವೂ ಸೇರಿದಂತೆ ಇಡೀ ವಿಶ್ವದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ವಾರದ ಕೊನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡುವ ಖಾಜಿ ಖಲೀಲುಲ್ಲಾ ಅವರು, ಭಯೋತ್ಪಾದಕ ಕೃತ್ಯಗಳಿಗೆಲ್ಲ ಭಾರತವು ಪಾಕಿಸ್ತಾನವನ್ನೇ ಹೊಣೆ ಮಾಡಿ ಆರೋಪ ಹೊರಿಸುತ್ತಿದೆ. ಉಗ್ರವಾದವನ್ನು ಮಟ್ಟ ಹಾಕಲು ಇಸ್ಲಾಮಾಬಾದ್ ನಡೆಸುತ್ತಿರುವ ಪ್ರಯತ್ನಗಳನ್ನು […]
↧