ವಾಷಿಂಗ್ಟನ್(ಪಿಟಿಐ): ಉಗ್ರರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿರುವ ಅಮೆರಿಕ, ವಿಶ್ವದ ಯಾವುದೇ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐಎಸ್) ದಮನಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ರಾಷ್ಟ್ರೀಯ ಭದ್ರತಾ ಪಡೆಗೆ ಅಧ್ಯಕ್ಷ ಬರಾಕ್ ಒಬಾಮ ಅವರು ಸೂಚಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಯೋತ್ಪಾದನಾ ತಡೆ ಹಾಗೂ ಐಎಸ್ ಸಂಘಟನೆಯ ನಿರ್ನಾಮ ಕಾರ್ಯವನ್ನು ತೀವ್ರಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಅಗತ್ಯ ಬಿದ್ದರೆ ಯಾವುದೇ ದೇಶದಲ್ಲಿ ಐಎಸ್ ಉಗ್ರ ಸಂಘಟನೆ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಒಬಾಮ ಅವರು ಒತ್ತಿ ಹೇಳಿದ್ದಾರೆ […]
↧