ಸ್ಟಾಕ್‌ಹೋಮ್ (ಏಜೆನ್ಸೀಸ್): ಸ್ವೀಡನ್‌ನ ಸ್ಟಾಕ್‌ಹೋಮ್ ಬಳಿಯ ಮರ್ಸ್ಟ್ರಾದಲ್ಲಿನ ನಿರಾಶ್ರಿತರ ನೋಂದಣಿ ಕೇಂದ್ರದ ಹೊರಭಾಗದಲ್ಲಿರುವ ಸಿರಿಯಾ ನಿರಾಶ್ರಿತ ಮಕ್ಕಳ ಮೇಲೆ ಸುಮಾರು ನೂರು ಮಂದಿ ಮುಸುಕುಧಾರಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಶುಕ್ರವಾರ ಸಂಜೆ ಸುಮಾರು ನೂರು ಮಂದಿ ಮುಸುಕುಧಾರಿಗಳು ಒಟ್ಟಾಗಿ ನಿರಾಶ್ರಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಬಹುತೇಕರು ನಿರಾಶ್ರಿತ ಮಕ್ಕಳು ಎಂದು ಸ್ವೀಡಿಷ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘ಮುಸುಕುಧಾರಿಗಳು ನಿರಾಶ್ರಿತ ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ’ ಎಂದು ಸ್ಟಾಕ್‌ಹೋಮ್ ಪೊಲೀಸ್ ವಕ್ತಾರ ಟೋವ್ ಹಗ್ ಹೇಳಿದ್ದಾರೆ. ‘ಮುಸುಕುಧಾರಿಗಳು […]
↧