ಮೆಡಿಟರೇನಿಯನ್ ಸಮುದ್ರವನ್ನು ನೋಡುತ್ತಾ ಬೀಸುವ ತಂಗಾಳಿಗೆ ಮುಖವೊಡ್ಡಿ ನಿಂತಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಬಹುಶಃ ಈ ಆಹ್ಲಾದಕರ ವಾತಾವರಣವೇ ಗ್ರೀಕ್ ವೀರ ಅಲೆಕ್ಸಾಂಡರ್‌ನಿಗೆ ತನ್ನ ಹೆಸರಿನ ನಗರವನ್ನು ಅಲ್ಲಿ ನಿರ್ಮಿಸಬೇಕೆಂಬ ಸಂಕಲ್ಪ ಮೂಡಿಸಿರಬೇಕು. ಈಜಿಪ್ಟ್‌ನ ಅಲೆಕ್ಸಾಂಡ್ರಿಯ ಒಂದು ಪರಿಪೂರ್ಣವಾದ ರೇವು. ಅಲ್ಲಿ ನವಿಲುಬಣ್ಣದ ಸಮುದ್ರ ದಿಂದ ಅಲೆಗಳು ಒಂದರ ಮೇಲೊಂದರಂತೆ ರಭಸದಿಂದ ಉರುಳುತ್ತಾ ಬರುತ್ತಿರುತ್ತವೆ. ಪ್ರಾಚೀನ ಕಾಲದಲ್ಲಿ ಫೆರೋಗಳ ಆಳ್ವಿಕೆಯ ಈಜಿಪ್ಟಿನ ಈ ಸಣ್ಣ ದ್ವೀಪದ ಮೇಲೆ ಕ್ರಿ.ಪೂ. 290ರಲ್ಲಿ ಸಾಸ್ಟ್ರಟಸ್ ಬಿಳಿಯ ಅಮೃತಶಿಲೆಯಿಂದ ಮಹಾನ್ ದೀಪಗೃಹವನ್ನು ನಿರ್ಮಿಸಿದ್ದ. […]
↧