ಇಸ್ಲಾಮಾಬಾದ್: ಕಾಶ್ಮೀರದೊಂದಿಗೆ ಬಾಲ್ಯದಿಂದಲೂ ತಮಗೆ ಭಾವನಾತ್ಮಕ ನಂಟು ಇರುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರಿ ಜನರ ಹಕ್ಕುಗಳಿಗಾಗಿ ತಮ್ಮ ದೇಶ ನಿರಂತರ ಹೋರಾಟ ನಡೆಸಲಿದೆ. ಕಾಶ್ಮೀರ, ಪಾಕಿಸ್ತಾನದ ಕುತ್ತಿಗೆಯ ಪ್ರಧಾನ ರಕ್ತನಾಳವಿದ್ದಂತೆ ಎಂದು ಹೇಳಿದ್ದಾರೆ. ‘ಕಾಶ್ಮೀರ ಏಕತಾ ದಿನ’ದ ಅಂಗವಾಗಿ ಮುಜಫ್ಫರಾಬಾದ್‌ನಲ್ಲಿ ಗುರುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು. ಕಾಶ್ಮೀರ ವಿವಾದ ಪರಿಹಾರವಾದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸಾಧ್ಯ. ಈ ಭಾಗದ ಸುಮಾರು 150 ಕೋಟಿ ಜನರು […]
↧